ಅಂಬಿಕಾ ನಾ ನಿನ್ನ ನಂಬಿದೆ
ಬೆಂಗಳೂರಿನ ಹತ್ತಿರದಲ್ಲೇ ಇರುವ ಒಂದು ಊರು ನೆಲಮಂಗಲದ ಒಂದು ಹಳ್ಳಿ ಅಲ್ಲಿ ಕೇವಲ ಹದಿನೈದು ಕುಟುಂಬಗಳು ಮಾತ್ರ ವಾಸ ಮಾಡುತಿರುತ್ತದೆ, ಈಗಿರುವಾಗ ಆ ಊರುಗೆ ಮಡಿಕೇರಿಯಿಂದ ಒಂದು ಹೆಣ್ಣು ಸೊಸೆಯಾಗಿ ಪದಗ್ರಹಣ ಮಾಡುತ್ತಾಳೆ, ಅದು ಸೊಸೆಯಾಗಿ ಬಂದ ಹುಡುಗಿಗೆ ಒಬ್ಬಳು ತಂಗಿ ಅಂಬಿಕಾ ಇದ್ದಳು, ಆಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಅಕ್ಕನ ಮನೆಯಲ್ಲಿಯೆ ಇದ್ದಳು, ಈಗಿರುವಾಗ ಆಕೆ ಅದೇ ಊರಿನ ಲಿಂಗಾಯತ ಜನಾಂಗದ ಹುಡುಗನನ್ನು ಪ್ರೀತಿಸುತಿದಳು ಇದನರಿತ ಆಕೆಯ ಅಕ್ಕ ತನ್ನ ತಂದೆ ತಾಯಿಗೆ ಸುದ್ದಿ ಮುಟ್ಟಿಸುತ್ತಾಳೆ. ಆಕೆಯ ತಂದೆ ತಾಯಿ ಅಂಬಿಕಾಗೆ ಗಂಡು ಹುಡುಕಲು ಶುರುಮಾಡುತ್ತಾರೆ ಆದರೆ ಕೆಲವೇ ದಿನದಲ್ಲಿ ಆಕೆ ಯಾರಿಗೂ ತಿಳಿಯದಂತೆ ಆ ಹುಡುಗನೊಂದಿಗೆ ಮದುವೆಯಾಗಿ ಅಕ್ಕನ ಮನೆಗೆ ಬರುತ್ತಾಳೆ ಆದರೆ ಅಕ್ಕ ಅವಳಿಗೆ ಬೈದು ಕಳುಹಿಸುತ್ತಾಳೆ ನಂತರ ಹುಡುಗನ ಮನೆಗೆ ನವ ದಂಪತಿಗಳು ಹೋಗುತ್ತಾರೆ ಆದರೆ ಅಲ್ಲಿಯೂ ಸಹ ಅವರಿಗೆ ಜಾಗ ಸಿಗುವುದಿಲ್ಲ. ನಂತರ ಆ ದಂಪತಿಗಳು ಎರಡು ದಿನ ತಮ್ಮ ಸ್ನೇಹಿತರ ಮನೆಯಲ್ಲಿ ಆಸರೆ ಪಡೆದು ಬೆಂಗಳೂರಿನಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಳುತ್ತಾರೆ, ಆತ ದುಡಿಯುತ್ತಿದ ಸಂಬಳದಿಂದ ಜೀವನ ನಿರ್ವಾಹಣೆ ಸಾಧ್ಯವಾದರಿಂದ ಆಕೆಯನ್ನು ಕೆಲಸದಿಂದ ಬಿಡಿಸುತ್ತಾನೆ. ಕೆಲವು ತಿಂಗಳುಗಳ ಕಾಲ ಆ ದಂಪತಿಗಳು ತಮ್ಮ ಪೋಷಕರ ಸಂಪರ್ಕ ಇಲ್ಲದಂತೆ ಜೀವನ ನಡೆಸಿಕೊಂಡು ಹೋಗುತ್ತಾರೆ ತುಂಬಾ ಮುದ್ದು ಮುದ್ದಾಗಿ ಬೆಳೆಸಿದ ಮಕ್ಕಳು ಒಂದೇ ಕ...